23-06-2022 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತ ಸರಕಾರದ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ ಶಾ ರವರಿಂದ ಉದ್ಘಾಟನೆಗೊಂಡ ದೇಶದಲ್ಲಿ 100 ವರ್ಷಗಳ ಪೂರೈಸಿದ ಪಟ್ಟಣ ಸಹಕಾರಿ ಬ್ಯಾಂಕ್ ಹಾಗೂ ಕ್ರೆಡಿಟ್ ಸೊಸೈಟಿಗಳ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ನಮ್ಮ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಪ್ರತಿಷ್ಠಿತ ಸರಕಾರಿ ನೌಕರರ ಸಹಕಾರಿ ಬ್ಯಾಂಕ್ 113 ವರ್ಷಗಳ ಪೂರೈಸಿದ್ದಕ್ಕೆ ಬ್ಯಾಂಕನ ಅಧ್ಯಕ್ಷರಾದ ಶ್ರೀ ಅರವಿಂದ ಹೂಗಾರ ರವರಿಗೆ ಕೇಂದ್ರ ಹಣಕಾಸು ಸಚಿವರಾದರ ಡಾ ಭಾಗವತ್ ಕರಾಡ ಮತ್ತು ಕೇಂದ್ರ ಸರ್ಕಾರದ ಸಹಕಾರ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಎಲ್ ವರ್ಮಾ ಅವರು ಸನ್ಮಾನಿಸಿ ಗೌರವಿಸಿದರು, ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಆನಂದಗೌಡ ಬಿರಾದಾರ, ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಎಂ ವಿ ಪರವತಿ ಹಾಗೂ ಶ್ರೀ ಎಂ ಕೆ ಜೋಶಿ ಹಾಗೂ ಪ ಸ ಬ್ಯಾಂಕ ಮಹಾ ಮಂಡಲಗಳ ನಿರ್ದೇಶಕರಾದ ಶ್ರೀ ಅಶೋಕ ಮನಗೂಳಿ ರವರು ಉಪಸ್ಥಿತರಿದ್ದರು.